ಧನುರಾಶಿ   
 ಆಕಾಶದಲ್ಲಿರುವ 88 ಪ್ರಧಾನ ನಕ್ಷತ್ರಪುಂಜಗಳ ಪೈಕಿ ಒಂದು (ಸ್ಯಾಜಿಟೇರಿಯಸ್). ರಾಶಿಚಕ್ರದಲ್ಲಿ ಒಂಬತ್ತನೆಯದು. ಇದರ ವ್ಯಾಪ್ತಿ ವಿಶಾಲವಾಗಿದೆ : ವಿಷುವದಂಶ 17 ಗಂ. 40 ಮಿ. ನಿಂದ 20 ಗಂ. 25 ಮಿ. ವರೆಗೆ; ಘಂಟಾವೃತ್ತಾಂಶ 120 ದ. ದಿಂದ 450 ದ, ವರೆಗೆ.  ಉತ್ತರ ಅಕ್ಷಾಂಶ 450 ಯ ಮೇಲ್ಪಟ್ಟು ಈ ರಾಶಿ ಪೂರ್ತಿಯಾಗಿ ಕಾಣಿಸುವುದಿಲ್ಲ. ನಮ್ಮ ಬ್ರಹ್ಮಾಂಡದ ಕೇಂದ್ರ ಈ ರಾಶಿಯ ದಿಶೆಯಲ್ಲಿದೆ. ಜುಲೈ-ಆಗಸ್ಟ್ ತಿಂಗಳುಗಳ ಸಂಜೆ ವೇಳೆ ಆಕಾಶದ ಪೂರ್ವ-ದಕ್ಷಿಣ ವಲಯದಲ್ಲಿ ಈ ರಾಶಿಯನ್ನು ಗುರುತಿಸಬಹುದು. ಕವಿಚಿಟ್ಟ ಚಮಚದಂತೆ ಇದರ ಆಕಾರವಿದೆ. ಆಕಾಶ ಗಂಗೆಯ ಸಾಕಷ್ಟು ಹೆಚ್ಚಿನ ಭಾಗ ಧನುರಾಶಿಯ ಪಶ್ಚಿಮವಲಯದಲ್ಲಿ ಹರಡಿ ಹೋಗಿದೆ. ಉಜ್ಜ್ವಲವಾಗಿ ಪ್ರಕಾಶಿಸುವ ಎರಡನೆಯ ಕಾಂತಿಮಾನದ ಎರಡು ನಕ್ಷತ್ರಗಳಲ್ಲದೆ (ಪೂರ್ವಾಷಾಢಾ ಮತ್ತು ಉತ್ತರಾಷಾಢಾ) ಮೂರನೆಯ ಕಾಂತಿಮಾನದ ನಕ್ಷತ್ರಗಳೂ ಇದರಲ್ಲಿವೆ. ಹಲವಾರು ನೀಹಾರಿಕೆಗಳನ್ನು (ನೆಬ್ಯುಲೆ) ಧನುರಾಶಿಯ ಆಸುಪಾಸಿನಲ್ಲಿ ವೀಕ್ಷಿಸಲಾಗಿದೆ. ಇವುಗಳ ಪೈಕಿ ಒ8, ಒ17, ಒ18, ಒ20, ಒ21, ಒ22, ಒ54, ಒ55, ಒ69 ಪ್ರಧಾನ. ಸಾಮಾನ್ಯವಾಗಿ ಒ20 ನೀಹಾರಿಕೆಯನ್ನು ಟ್ರೈಫಿಡ್ ನೀಹಾರಿಕೆ  ಎಂದು ಕರೆಯುವುದುಂಟು.

	ಗ್ರೀಕ್ ಮತ್ತು ರೋಮನ್ ಪುರಾಣಗಳಲ್ಲಿ ಧನುರಾಶಿಗೆ ವಿಶೇಷ ಮಹತ್ತ್ವ ಇದೆ. ಅತ್ಯಂತ ಶ್ರಮ ಸಾಧ್ಯವಾದ ಹನ್ನೆರಡು ಸಾಹಸಕಾರ್ಯಗಳನ್ನು ನಿರ್ವಹಿಸದ ಬಲಶಾಲಿ ವೀರನಾದ ಹಕ್ರ್ಯುಲಿಸನ ವಿಷಪೂರಿತ ಬಾಣದ ಪೆಟ್ಟಿಗೆ ಸಿಕ್ಕಿ ಪ್ರಾಣಬಿಟ್ಟ ಮತ್ತೊಬ್ಬ ಕುಶಲಿ ಬಿಲ್ಲುಗಾರ ನರಾಶ್ವರೂಪದ ಕೈರೋನನಂತೆ ಈ ರಾಶಿಯನ್ನು ಚಿತ್ರಿಸಿರುವುದು ಕಂಡುಬರುತ್ತದೆ. ಜೂಪಿಟರ್ ಈತನಿಗೆ ನಕ್ಷತ್ರಸ್ಥಾನವನ್ನು ಒದಗಿಸಿದನೆಂದೂ ಈತ ಸದಾಕಾಲವೂ ವೃಶ್ಚಿಕರಾಶಿಯತ್ತ ಬಾಣವನ್ನು ಹೂಡಿರುವನೆಂದೂ ಹೇಳಲಾಗಿದೆ. ಆದ್ದರಿಂದ ಧನುರಾಶಿ ಎಂಬುದು ಅನ್ವರ್ಥವಾಗಿದೆ. ಆಕಾಶಗಂಗೆಯ ಕೇಂದ್ರಭಾಗವೂ ಧನುರಾಶಿಯ ದಿಕ್ಕಿನಲ್ಲಿದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ